ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರದ ಮಂತ್ರಿಮಂಡಲದ ಸಂಸ್ಥೆಯಾಗಿದ್ದು, ಮಾಹಿತಿ, ಪ್ರಸಾರ, ಪತ್ರಿಕಾ ಮತ್ತು ಭಾರತದ ಸಿನೆಮಾ ಕ್ಷೇತ್ರಗಳಲ್ಲಿ ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ . ಭಾರತ ಸರ್ಕಾರದ ಪ್ರಸಾರ ವಿಭಾಗವಾದ ಪ್ರಸಾರ್ ಭಾರತಿಯ ಆಡಳಿತದ ಜವಾಬ್ದಾರಿಯನ್ನು ಸಚಿವಾಲಯ ಹೊಂದಿದೆ. ಭಾರತದಲ್ಲಿ ಪ್ರಸಾರವಾಗುವ ಚಲನಚಿತ್ರಗಳ ನಿಯಂತ್ರಣಕ್ಕೆ ಈ ಸಚಿವಾಲಯದ ಅಡಿಯಲ್ಲಿರುವ ಇತರ ಪ್ರಮುಖ ಶಾಸನಬದ್ಧ ಸಂಸ್ಥೆಯು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣವಾಗಿದೆ. ಸಚಿವಾಲಯದ ಉಸ್ತುವಾರಿಯನ್ನು ಪ್ರಸ್ತುತ ಮಂತ್ರಿಗಳಾದ ಪ್ರಕಾಶ್ ಜಾವಡೇಕರ್ ಹೊಂದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಜಾಲತಾಣ ಟ್ವಿಟ್ಟರ್ನಲ್ಲಿ ಫೇಸ್‌ಬುಕ್‌ನಲ್ಲಿ ಎಂಐಬಿ